ಕಾಡು ಕಣಿಗಿಲೆ ಒಂದು ಔಷಧೀಯ ಸಸ್ಯ. == ವೈಜ್ಞಾನಿಕ ವರ್ಗೀಕರಣ == ಅಪೋಸೈನೇಸೀ ಕುಟುಂಬದ ಗಿಡ. ತೆವೀಷಿಯ ನೀರಿಫೋಲಿಯ ವೈಜ್ಞಾನಿಕ ನಾಮ.ಕನ್ನಡದಲ್ಲಿ ಕರವೀರ, ಸಂಸ್ಕೃತದಲ್ಲಿ ಅಶ್ವಘ್ನ, ಅಶ್ವಹ, ಹರಿ ಪ್ರಿಯ, ಕರವೀರ ಮುಂತಾದ ಹೆಸರುಗಳಿವೆ.ಇಂಗ್ಲೀಷಿನಲ್ಲಿ ಇಂಡಿಯನ್ ಒಲೆಂಡರ್ ಎಂಬ ಹೆಸರುಗಳಿವೆ. == ಲಕ್ಷಣಗಳು == ೧೦ ರಿಂದ ೨೦ ಆಡಿ ಬೆಳೆಯುವ ಪೊದೆಸಸ್ಯ. ಸಪೂರವಾಗಿ ಉದ್ದವಿರುವ ಎಲೆಗಳು. ಸೌಮ್ಯ ಸುಗಂಧಭರಿತ ಹಳದಿ ಪುಷ್ಪ.ಕಡು ಕೆಂಪು ಅಥವಾ ಕಪ್ಪು ಬಣ್ಣದ ದೊಡ್ಡ ಗಾತ್ರದ ಕಾಯಿಗಳು.ಕಾಂಡದಲ್ಲಿ ಒಸರುವ ಬಿಳಿ ದ್ರವ ಅತ್ಯಂತ ವಿಷಕಾರಿ.ಇದು ನಿತ್ಯ ಹರಿದ್ವರ್ಣದ ದೊಡ್ಡ ಪೊದರುಗಿಡ. ಕೆಲವು ಕಡೆಗಳಲ್ಲಿ ಚಿಕ್ಕ ಮರವಾಗಿಯೂ ಬೆಳೆಯುತ್ತದೆ. ಇದರ ಮೂಲಸ್ಥಾನ ದಕ್ಷಿಣ ಅಮೆರಿಕ. ಭಾರತದ ಆದ್ಯಂತ ಸ್ವಾಭಾವಿಕವಾಗಿ ಬೆಳೆಯುತ್ತದೆ. ಗಿಡದಲ್ಲಿ ಹಾಲು ಬರುತ್ತದೆ. ಎಲೆಗಳು ಉದ್ದ ಮತ್ತು ನೀಳವಾಗಿವೆ. ಹೂಗಳ ಬಣ್ಣ ಹಳದಿ, ಆಕಾರ ಗಂಟೆಯಂತೆ. ದಳಗಳ ಮೇಲೆ ದಳರೋಮಗಳು (ಕೊರೋನಾ) ಬೆಳೆದಿರುತ್ತದೆ. ಕೇಸರಗಳು ದಳಕೊಳವೆಯ ಗಂಟಲಲ್ಲಿ ಒಟ್ಟುಗೂಡಿವೆ. ಶಲಾಕಾಗ್ರ ಲಿಂಗಾಕಾರವಾಗಿದೆ. ಕಾಯಿಯ ಉದ್ದ 3 ಸೆಂಮೀ., ಅಗಲ 3.8 ಸೆಂಮೀ. ಇದರಲ್ಲಿ 4 ಬೀಜಗಳಿವೆ. ಕಾಯಿಗೆ ದುಂದಾಡ ಮೂಲೆಗಳಿವೆ. == ಉಪಯೋಗಗಳು == ಅಲಂಕಾರಿಕ ಸಸ್ಯವಾಗಿ ರಸ್ತೆ ಬದಿಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.ಗಿಡ ಬಹಳ ಕಹಿ. ಇದರ ಹಾಲು ವಿಷ. ಆಗಾಗ ಬಿಟ್ಟು ಬರುವ ಜ್ವರಕ್ಕೆ ಗಿಡದ ತೊಗಟೆಯನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಬೀಜಗಳು ಸಹ ವಿಷಪೂರಿತವಾದವು. ಮುಂಡರು ಹಂದಿ ಮತ್ತು ನರಿಗಳನ್ನು ಸಾಯಿಸಲು ಬೀಜಗಳನ್ನು ವಿಷವಾಗಿ ಉಪಯೋಗಿಸುತ್ತಾರೆ. ಇವುಗಳಿಂದ ತೆಗೆದ ಎಣ್ಣೆಗೆ ಭೇಧಿ ಔಷಧಿಯಾಗಿ ಬಳಕೆ ಉಂಟು. ಕಾಡು ಕಾಸಿಕಣಗಿಲೆ ಗಿಡದಿಂದ ಥೆವಿಟಿನ್, ಥೆವಿಟಾಕ್ಸಿನ್, ನಿರಿಫೋಲಿನ್, ಅಸಿಟೈಲ್ ಮುಂತಾದ ರಾಸಾಯನಿಕ ಔಷಧಿಗಳನ್ನು ಬೇರ್ಪಡಿಸಿದ್ದಾರೆ. ಥೆವಿಟಿನ್ ಮುಂತಾದ ಔಷಧಿ ಹೃದ್ರೋಗಗಳಿಗೆ ಬಹಳ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಮೂಲರೋಗ, ತೊನ್ನು, ಚರ್ಮರೋಗಗಳಿಗೂ ಈ ಗಿಡದಿಂದ ಔಷಧಿಗಳನ್ನು ತಯಾರಿಸುತ್ತಾರೆ.ಇಲಿನಾಶಕವಾಗಿಯೂ ಉಪಯೋಗದಲ್ಲಿದೆ. == ಔಷಧೀಯ ಗುಣಗಳು == ಆಯುರ್ವೇದ ಔಷಧ ಪದ್ಧತಿಯಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಬೇಕಾದ ಕೆಲವು ಔಷಧಗಳನ್ನು ಇದರ ಕಾಂಡದಲ್ಲಿರುವ ಬಿಳಿ ದ್ರವದಿಂದ ತಯಾರಿಸುತ್ತಾರೆ. ಎಲೆ ಮತ್ತು ಹೂವಿನಿಂದ ವಾತ,ಕಫ ಮತ್ತು ಪಿತ್ತಕ್ಕೆ ಸಂಬಂಧಿ ಸಿದಂತೆ ಹಲವು ಔಷಧ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಜೇಡ ಕಚ್ಚಿದ ಗಾಯಕ್ಕೆ ಇದರಿಂದ ಔಷಧ ತಯಾರಿಸುತ್ತಾರೆ. ಕಾಡು ಕಣಿಗಿಲೆ ಸಸ್ಯದಿಂದ ಜೈವಿಕ ಕೀಟನಾಶಕವನ್ನು ತಯಾರಿಸುತ್ತಾರೆ.ಕೆಲವು ಪ್ರಭೇದಗಳ ಸಸ್ಯಗಳಿಂದ ಗೆದ್ದಲು ನಿರೋಧಕ,ಫಂಗಸ್ ನಿರೋಧಕ ಬಣ್ಣಗಳನ್ನು ತಯಾರಿಸುತ್ತಾರೆ.. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == - .: . - 2004-12-09 ವೇಬ್ಯಾಕ್ ಮೆಷಿನ್ ನಲ್ಲಿ.